GST
ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ (ರಿ)
ನಂ.2817, 12ನೇ ಮುಖ್ಯರಸ್ತೆ, 2ನೇ ಹಂತ, ರಾಜಾಜಿನಗರ, ಬೆಂಗಳೂರು – 560 010.
“ಆದಾಯ ತೆರಿಗೆ ಹಾಗೂ ಜಿಎಸ್ಟಿ ಕುರಿತ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ"
“INCOME TAX AND GST RELATED STATE LEVEL TRAINING PROGRAM "
ಆದಾಯ ತೆರಿಗೆ ಕಾಯ್ದೆ, 1962
1. ಸಹಕಾರಿಗಳಿಗೆ ಆದಾಯ ತೆರಿಗೆ ಕಾಯ್ದೆ ಅನ್ವಯವಾಗುತ್ತದೆಯೆ?
o ಆದಾಯ ತೆರಿಗೆ ಕಾಯ್ದೆಯ ಪ್ರಕರಣ 4ರ ಪ್ರಕಾರ ಯಾವುದೇ ಕರನಿರರ್ಧರಣಾ ವರ್ಷದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಹಿಂದಿನ ವರ್ಷದ ಒಟ್ಟು ತೆರಿಗೆದಾಯಕ ಆದಾಯದ ಮೇಲೆ ತೆರಿಗೆಯನ್ನು ಆಕರಿಸಲಾಗುತ್ತದೆ. ಅಂದರೆ "ವ್ಯಕ್ತಿ"ಯ ಪರಿಭಾಷೆಯಡಿಯಲ್ಲಿ ಬರುವವರು ಮಾತ್ರ ಆದಾಯ ತೆರಿಗೆ ಪಾವತಿಸಬೇಕಾಗಿರುತ್ತದೆ.
o ಕಾಯ್ದೆಯ ಪ್ರಕರಣ 2 ಕಲಂ 31 ರ ಪ್ರಕಾರ "ವ್ಯಕ್ತಿ" ಎಂದರೆ
o ನೈಸರ್ಗಿಕ ವ್ಯಕ್ತಿ, ಹಿಂದೂ ಅವಿಭಕ್ತ ಕುಟುಂಬ, ಕಂಪನಿ, ಪಾಲುದಾರಿಕಾ ಸಂಸ್ಥೆ
o ನಿಯೋಜಿತ ಯಾ ಅನಿಯೋಜಿತ ಸಂಘ ಯಾ ಸಂಸ್ಥೆ ಯಾ ಒಕ್ಕೂಟ, ಸ್ಥಳೀಯ ಪ್ರಾಧಿಕಾರ
o ಮೇಲಿನವುಗಳಿಗೆ ಒಳಪಡದ ಇತರೆ ಕೃತಕ ನ್ಯಾಯಿಕ ಪ್ರಾಧಿಕಾರಗಳು.
o ಆದಾಯ ತೆರಿಗೆ ಕಾಯ್ದೆಯ ಪ್ರಕರಣ 2 ಕಲಂ 19 ರ ಪ್ರಕಾರ ಸಹಕಾರ ಸಂಸ್ಥೆಗಳು ಎಂದರೆ 1912ರ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ಅಥವಾ ಯಾವುದೇ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳನ್ನು ನೋಂದಾಯಿಸಲು ಇರುವ ಯಾವುದೇ ಸಹಕಾರಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಪಡೆದ ಸಂಸ್ಥೆ.
o ಆದ್ದರಿಂದ ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಕಾಯ್ದೆ ಅನ್ವಯಿಸುತ್ತದೆ.
2. ಆದಾಯದ ಗಣನೆ ಮತ್ತು ಆದಾಯ ವಿವರ ಸಲ್ಲಿಸುವಿಕೆ :
o ನ್ಯಾಯಾಲಯದ ಒಂದು ಪ್ರಮುಖ ನಿರ್ಣಯದಂತೆ ಸಹಕಾರ ಸಂಸ್ಥೆಗಳು ನಿಯೋಜಿತ ಸಂಘ ಸಂಸ್ಥೆಗಳು ಎಂದು ಪರಿಗಣಿಸಲ್ಪಡುತ್ತವೆ. ಆದ್ದರಿಂದ ಸಹಕಾರ ಸಂಸ್ಥೆಗಳು ಆರ್ಥಿಕ ವರ್ಷದಲ್ಲಿ ಗಳಿಸಿದ ಒಟ್ಟು ಆದಾಯದ ಮೇಲೆ ತೆರಿಗೆ ಬಾಧ್ಯತೆ ಇರುತ್ತದೆ.
o ಆದಾಯ ತೆರಿಗೆ ಕಾಯ್ದೆಯ ಪ್ರಕರಣ 80P ಅನ್ವಯ ಸಹಕಾರ ಸಂಸ್ಥೆಗಳ ನಿರ್ದಿಷ್ಟ ಆದಾಯಗಳಿಗೆ ಸಂಪೂರ್ಣ ಕಡಿತಗಳಿರುವುದು ನಿಜವಾದರೂ ಸಹಕಾರ ಸಂಸ್ಥೆಗಳು ಬೇರೆ ಬೇರೆ ಮೂಲಗಳಿಂದ ಗಳಿಸಿದ ಆದಾಯಗಳನ್ನು ಆದಾಯ ತೆರಿಗೆ ಉಪಬಂಧಗಳ ಅನ್ವಯ ಸೂಕ್ತವಾಗಿ ಗಣನೆ ಮಾಡಬೇಕು.
o ಇಲ್ಲಿ ನಾವು ವಿನಾಯಿತಿ ಮತ್ತು ಕಡಿತ ಎಂಬ ಪದಗಳ ವ್ಯತ್ಯಾಸಗಳನ್ನು ಗಮನಿಸಬೇಕು. ವಿನಾಯಿತಿಗೊಳಗಾದ ಆದಾಯವು ಒಟ್ಟು ವರಮಾನದ ಗಣನೆಯ ಪರಿಮಿತಿಗೆ ಒಳಪಡುವುದಿಲ್ಲ. ಕಾಯ್ದೆಯ 3ನೇ ಅಧ್ಯಾಯವು ಅಂತಹ ಆದಾಯದ ಬಗ್ಗೆ ತಿಳಿಸುತ್ತದೆ. ಕಾಯ್ದೆಯ ಅಧ್ಯಾಯ 6ಎ ಆದಾಯ ಗಣನೆಯ ಸಂದರ್ಭದಲ್ಲಿ ಪರಿಗಣಿಸಬೇಕಾದ ಕಡಿತಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ.
o ಕಾಯ್ದೆಯ ಪ್ರಕರಣ 80ಬಿ ಯ ಕಲಂ 5ರ ಪ್ರಕಾರ ಒಟ್ಟು ವರಮಾನ ಎಂದರೆ ಕಾಯ್ದೆಯ ಪ್ರಕಾರ ಗಣನೆ ಮಾಡಿದ, ಅಧ್ಯಾಯ 6ಎ ಅಡಿಯಲ್ಲಿ ಕಡಿತಗಳಿಗೊಳಪಡದ, ಎಲ್ಲಾ ಮೂಲಗಳಿಂದ ಗಳಿಸಿದ ಒಟ್ಟು ಆದಾಯ.
o ಇದರಿಂದ ಸಹಕಾರ ಸಂಸ್ಥೆಗಳು ತನ್ನ ವಿವಿಧ ಮೂಲಗಳಿಂದ ಗಳಿಸಿದ ಆದಾಯದಲ್ಲಿ ನಿರ್ದಿಷ್ಟವಾದ ಕೆಲವು ಕಡಿತಗಳನ್ನು ಮಾಡಬಹುದೇ ಹೊರತು ಯಾವುದೇ ಆದಾಯಗಳಿಗೆ ವಿನಾಯಿತಿ ಇರುವುದಿಲ್ಲ ಎಂದು ಅರಿವಾಗುತ್ತದೆ.
o ಹಾಗಾಗಿ ಪ್ರತಿಯೊಂದು ಸಹಕಾರ ಸಂಸ್ಥೆಯೂ ತನ್ನ ವಿವಿಧ ಮೂಲಗಳ ಆದಾಯವನ್ನು ಕಾಯ್ದೆಯ ಕಲಂಗಳಿಗನುಗುಣವಾಗಿ ಸೂಕ್ತವಾಗಿ ಪರಿಗಣಿಸಿ ಲೆಕ್ಕಹಾಕಬೇಕು ಮತ್ತು ಕಾಯ್ದೆಯ 139(1)ನೇ ಪ್ರಕರಣದನ್ವಯ ನಿರ್ದಿಷ್ಟ ದಿನಾಂಕದೊಳಗಾಗಿ ಆದಾಯ ವಿವರವನ್ನು ಸಂಬಂಧಿಸಿದ ಆದಾಯ ತೆರಿಗೆ ಕಛೇರಿಗೆ ಸಲ್ಲಿಸಬೇಕು.
o ಪ್ರಕರಣ 44 ಎಬಿ : ಲೆಕ್ಕಪರಿಶೋಧನೆ :
o ಪತ್ತಿನ ವ್ಯವಹಾರ ನಡೆಸುವ ಸಹಕಾರ ಸಂಸ್ಥೆಗಳ ವಾರ್ಷಿಕ ಒಟ್ಟು ಜಮಾ ರೂ. 1 ಕೋಟಿ ಮೀರಿದಲ್ಲಿ ಅಂತಹ ಸಂಸ್ಥೆಗಳು ತಮ್ಮ ಲೆಕ್ಕಗಳನ್ನು ಚಾರ್ಟರ್ಡ್ ಅಕೌಂಟೆಂಟ್ರವರಿಂದ ಆದಾಯ ತೆರಿಗೆ ಕಾಯ್ದೆ ಪ್ರಕರಣ44ಂಃ ಅಡಿಯಲ್ಲಿ ಲೆಕ್ಕಪರಿಶೋಧನೆ ಮಾಡಿಸಬೇಕು.
3. ಕಾಯ್ದೆ ಪ್ರಕರಣ 40 :
o ಸದ್ರಿ ಕಲಂನನ್ವಯ ಕೆಲವು ಖರ್ಚುಗಳು ಆದಾಯ ಕಾಯ್ದೆಯ ಅಡಿಯಲ್ಲಿ ಕಳೆಯಲು ಅನರ್ಹವಾಗಿರುತ್ತವೆ. ಅವುಗಳೆಂದರೆ:
o ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ ಮುಂತಾದ ತೆರಿಗೆಗಳು
o ರಿಟರ್ನ್ ಸಲ್ಲಿಸುವ ಮೊದಲು ಪಾವತಿಸದ ಶಾಸನಬದ್ದ ಖರ್ಚುಗಳು (PF, ST, PT, Bonus, Bank Interest, etc.,)
o ಮೂಲದಲ್ಲಿ ತೆರಿಗೆ ಕಡಿತ ಮಾಡಬೇಕಾದ ಖರ್ಚುಗಳನ್ನು ತೆರಿಗೆ ಕಡಿತ ಮಾಡದೇ ಪಾವತಿಸಿದರೆ ಅಂತಹ ಖರ್ಚುಗಳು
o ಹಿಂದಿನ ಸಾಲುಗಳಲ್ಲಿ ಆಕರಣೆ ಪದ್ದತಿಯಲ್ಲಿ ಪರಿಗಣಿಸಿದ ಖರ್ಚುಗಳು ಸದರಿ ಸಾಲಿನಲ್ಲಿ ಪಾವತಿಯಾಗಿದ್ದರೆ
4. ಕಾಯ್ದೆ ಪ್ರಕರಣ 40ಂ(3) :
o ಯಾವುದೇ ಒಂದು ದಿನದಲ್ಲಿ ರೂ.10,000ಗೆ ಮೀರಿ ಯಾವುದೇ ಖರ್ಚನ್ನು ಕ್ರಾಸ್ ಮಾಡಿದ ಚೆಕ್ ಅಥವಾ ಬ್ಯಾಂಕ್ ಡ್ರಾ ಹೊರತಾಗಿ ಪಾವತಿಸಿದರೆ ಅಂತಹ ಖರ್ಚುಗಳು ಆದಾಯ ಕಾಯ್ದೆಯ ಅಡಿಯಲ್ಲಿ ಕಳೆಯಲು ಅನರ್ಹವಾಗುವುದು.
5. ಕಾಯ್ದೆ ಪ್ರಕರಣ 80P(2) :
o ಪ್ರಕರಣ 80P(2)ರಡಿಯಲ್ಲಿ ತಿಳಿಸಿದ ವ್ಯವಹಾರಗಳನ್ನು ನಡೆಸುತ್ತಿರುವ ಸಹಕಾರ ಸಂಸ್ಥೆಗಳು ಸದರಿ ಪ್ರಕರಣದಡಿಯಲ್ಲಿ ತಿಳಿಸಿದ ವ್ಯವಹಾರಗಳಿಂದ ಬಂದ ಆದಾಯಗಳಿಗೆ ಆಯಾ ಕಲಂಗಳಲ್ಲಿ ಸೂಚಿಸಿದಂತೆ ಕಡಿತಕ್ಕೆ ಅರ್ಹವಾಗುವುದು.
6. ಕಾಯ್ದೆ ಪ್ರಕರಣ 80P(2(ಚಿ)(i)) :
o ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿರುವ ಯಾ ಸದಸ್ಯರಿಗೆ ಸಾಲ ಸೌಲಭ್ಯ ನೀಡುತ್ತಿರುವ ಸಹಕಾರ ಸಂಸ್ಥೆಗಳಿಗೆ ತನ್ನ ಸದಸ್ಯರೊಂದಿಗೆ ನಡೆಸಿದ ವ್ಯವಹಾರದಿಂದ ಬಂದ ಸಂಪೂರ್ಣ ಆದಾಯಕ್ಕೆ ಪ್ರಕರಣ 80P(2(ಚಿ)(i)) ರಲ್ಲಿ ಕಡಿತಗಳನ್ನು ನೀಡಲಾಗಿದೆ. ಆದರೆ ಕಾಯ್ದೆಯಲ್ಲಿ ಬ್ಯಾಂಕಿಂಗ್ ಎಂಬ ಪದಕ್ಕೆ ಪರಿಭಾಷೆಯನ್ನು ನೀಡಿರುವುದಿಲ್ಲ. ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949ರಡಿಯಲ್ಲಿ ಬ್ಯಾಂಕಿಂಗ್ ಎಂದರೆ "ಸಾಲ ನೀಡುವ ಮತ್ತು ನಿಯೋಜಿಸುವ ಸಲುವಾಗಿ ಸಾರ್ವಜನಿಕರಿಂದ ಕೇಳಿದಾಗ ಹಿಂದಿರುಗಿಸುವ ಅಥವಾ ಚೆಕ್ ಯಾ ಡ್ರಾಫ್ಟ್ ಮೂಲಕ ಹಿಂಪಡೆಯುವ ಸೌಲಭ್ಯ ಒದಗಿಸಿ ಹಣವನ್ನು ಠೇವಣಿಯಾಗಿ ಸ್ವೀಕರಿಸುವುದು" ಎಂದಿದೆ. ಆದ್ದರಿಂದ ಈ ವ್ಯವಹಾರಗಳಿಂದ ಬಂದ ಆದಾಯವು ಸದರಿ ಪ್ರಕರಣ 80P(2) ರಡಿಯಲ್ಲಿ ಕಡಿತಕ್ಕೆ ಅರ್ಹವಾಗುವುದು.
7. ಕಾಯ್ದೆ ಪ್ರಕರಣ 80P(2(ಛಿ)) :
o ಪ್ರಕರಣ 80P(2(ಚಿ)) ಯಾ (b) ನಲ್ಲಿ ಹೇಳಿದ ವ್ಯವಹಾರಗಳಿಗೆ ಹೊರತಾಗಿ ಬೇರೆ ಯಾವುದೇ ವ್ಯವಹಾರ ನಡೆಸುತ್ತಿರುವ ಸಹಕಾರ ಸಂಸ್ಥೆಗಳಿಗೆ ಸದರಿ ವ್ಯವಹಾರದಿಂದ ಬಂದ ಆದಾಯದಲ್ಲಿ ಪ್ರಕರಣ 80P(2(ಛಿ)) ರನ್ವಯ 50,000ರೂಗಳ ಕಡಿತಗಳನ್ನು ನೀಡಲಾಗಿದೆ.
o ಬಳಕೆದಾರರ ಸಹಕಾರ ಸಂಸ್ಥೆಗಳು ಪ್ರಕರಣ 80P(2(ಚಿ)) ಯಾ (b) ನಲ್ಲಿ ಹೇಳಿದ ವ್ಯವಹಾರಗಳಿಗೆ ಹೊರತಾದ ಬೇರೆ ಯಾವುದೇ ವ್ಯವಹಾರದಿಂದ ಬಂದ ಆದಾಯದಲ್ಲಿ ಪ್ರಕರಣ 80P(2(ಛಿ)(i)) ರನ್ವಯ ಒಂದು ಲಕ್ಷ ರೂಗಳ ಕಡಿತಗಳಿಗೆ ಅರ್ಹರಾಗಿರುತ್ತವೆ.
8. ಕಾಯ್ದೆ ಪ್ರಕರಣ 80P (2(ಜ)
o ಪ್ರಕರಣ 80P(2(ಜ)) ನಲ್ಲಿ ಸಹಕಾರಿ ಸಂಸ್ಥೆಗಳು ಬೇರೊಂದು ಸಹಕಾರಿ ಸಂಸ್ಥೆಗಳಲ್ಲಿ ಮಾಡಿದ ಹೂಡಿಕೆಗಳ ಮೇಲೆ ಬಂದ ಆದಾಯದ ಮೇಲೆ ಸಂಪೂರ್ಣ ಕಡಿತವನ್ನು ನೀಡಲಾಗಿದೆ.
9. ಕಾಯ್ದೆ ಪ್ರಕರಣ 139ಂ :
o ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಸೂಕ್ತ ಪ್ರಾಧಿಕಾರಕ್ಕೆ ನಮೂನೆ 49 ಎ ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ಖಾಯಂ ನೋಂದಣಿ ಸಂಖ್ಯೆಯನ್ನು (PAN) ಪಡೆಯತಕ್ಕದ್ದು ಮತ್ತು ಆದಾಯ ತೆರಿಗೆ ಪಾವತಿಸುವ ಎಲ್ಲ ಚಲನ್ಗಳಲ್ಲಿ ಮತ್ತು ವಾರ್ಷಿಕ ಆದಾಯ ತೆರಿಗೆ ವಿವರ ಸಲ್ಲಿಸುವಾಗ ಈ ಖಾಯಂ ನೋಂದಣಿ ಸಂಖ್ಯೆಯನ್ನು ತಪ್ಪದೇ ನಮೂದಿಸತಕ್ಕದ್ದು.
10. ಕಾಯ್ದೆ ಪ್ರಕರಣ 139(1):
o 139(1)ರಲ್ಲಿ ತಿಳಿಸಿದಂತೆ ನಿಗದಿತ ಅವಧಿಯೊಳಗಾಗಿ ಆದಾಯ ತೆರಿಗೆ ವಿವರಗಳನ್ನು ತೆರಿಗೆ ಇಲಾಖೆಗೆ ಸಲ್ಲಿಸತಕ್ಕದ್ದು. ಇದರ ಪ್ರಕಾರ ಸಹಕಾರ ಸಂಸ್ಥೆಗಳು ಸಂಬಂಧಪಟ್ಟ ಕರನಿರ್ಧರಣಾ ವರ್ಷದ ಸೆಪ್ಟೆಂಬರ್ 30ರೊಳಗೆ ರಿಟರ್ನ್ ಸಲ್ಲಿಸಬೇಕು
11. ಕಲಂ 269ಎಸ್ಎಸ್
o ಯಾವುದೇ ವ್ಯಕ್ತಿಯು ಯಾವುದೇ ವ್ಯಕ್ತಿಯಿಂದ ಠೇವಣಿ ಅಥವಾ ಸಾಲವಾಗಿ ಯಾ ಸ್ಥಿರಾಸ್ತಿ ವ್ಯವಹಾರದ ಸಲುವಾಗಿ ಒಟ್ಟು ಇಪ್ಪತ್ತು ಸಾವಿರ ರೂಗಳು ಅಥವಾ ಅದನ್ನು ಮೀರುವ ಮೊತ್ತವನ್ನು ಬ್ಯಾಂಕಿನ ಅಕೌಂಟ್ ಪೇಯೀ ಚೆಕ್ ಯಾ ಬ್ಯಾಂಕಿನ ಅಕೌಂಟ್ ಡ್ರಾಫ್ಟ್ ಹೊರತಾಗಿ ಬೇರೆ ಯಾವುದೇ ರೂಪದಲ್ಲಿ ಸ್ವೀಕರಿಸುವಂತಿಲ್ಲ
12. ಕಲಂ 269ಟಿ
o ಯಾವುದೇ ವ್ಯಕ್ತಿಯು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಿರುವ ಠೇವಣಿ ಅಥವಾ ಸಾಲ ಯಾ ಸ್ಥಿರಾಸ್ತಿ ವ್ಯವಹಾರದ ಸಲುವಾಗಿ ಪಡೆದ ಮೊತ್ತವು ಒಟ್ಟು ಇಪ್ಪತ್ತು ಸಾವಿರ ರೂಗಳು ಅಥವಾ ಅದನ್ನು ಮೀರುವಂತಿದ್ದರೆ ಅದನ್ನು ಸ್ವೀಕರಿಸುವವನ ಹೆಸರಿನಲ್ಲಿ ಬ್ಯಾಂಕಿನ ಅಕೌಂಟ್ ಪೇಯೀ ಚೆಕ್ ಯಾ ಬ್ಯಾಂಕಿನ ಅಕೌಂಟ್ ಡ್ರಾಫ್ಟ್ ಹೊರತಾಗಿ ಬೇರೆ ಯಾವುದೇ ರೂಪದಲ್ಲಿ ಮರುಪಾವತಿಸುವಂತಿಲ್ಲ
13. ವಿನಾಯಿತಿ
o ಈ ನಿಯಮವು ಕೆಳಕಂಡವರಿಗೆ ಅನ್ವಯಿಸುವುದಿಲ್ಲ
(i) ಸರ್ಕಾರ, ಸಹಕಾರೀ ಬ್ಯಾಂಕುಗಳೂ ಸೇರಿದಂತೆ ಯಾವುದೇ ಬ್ಯಾಂಕು, ಅಂಚೆ ಕಛೇರಿಗಳ ಉಳಿತಾಯ ಖಾತೆಗಳ ಸ್ವೀಕೃತಿ/ ಮರುಪಾವತಿಗಳಿಗೆ
(ii) ಕೇಂದ್ರ/ರಾಜ್ಯ ಸರ್ಕಾರ ಸ್ಥಾಪಿಸಿದ ನಿಗಮ/ಮಂಡಳಿಗಳಿಗೆ
(iii) ಕಾಲಕಾಲಕ್ಕೆ ಕೇಂದ್ರ ಸರ್ಕಾರವು ಗೆಜೆಟ್ನಲ್ಲಿ ಪ್ರಕಟಿಸುವ ವ್ಯಕ್ತಿಗಳಿಗೆ, ವರ್ಗಗಳಿಗೆ, ಅಥವಾ ಸ್ವೀಕೃತಿ/ಮರುಪಾವತಿಗಳಿಗೆ.
14. ಕಲಂ 269ಎಸ್ಟಿ
o ಯಾವುದೇ ವ್ಯಕ್ತಿಯು ಎರಡು ಲಕ್ಷ ರೂಗಳು ಅಥವಾ ಹೆಚ್ಚು ಮೊತ್ತವನ್ನು
(i) ಒಂದು ದಿನದಲ್ಲಿ ಒಬ್ಬ ವ್ಯಕ್ತಿಯಿಂದ ಅಥವಾ
(ii) ಒಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಅಥವಾ
(iii) ಒಂದು ಘಟನೆ ಯಾ ಸಂದರ್ಭಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ
ಬ್ಯಾಂಕಿನ ಅಕೌಂಟ್ ಪೇಯೀ ಚೆಕ್ ಯಾ ಬ್ಯಾಂಕಿನ ಅಕೌಂಟ್ ಡ್ರಾಫ್ಟ್ ಯಾ ಬ್ಯಾಂಕ್ ಅಕೌಂಟಿನ ಮೂಲಕ ನಡೆಸುವ ಪಾವತಿ ತೀರುವಳಿ ವ್ಯವಸ್ಥೆಯ (Electronic Clearing System) ಹೊರತಾಗಿ ಬೇರೆ ಯಾವುದೇ ರೂಪದಲ್ಲಿ ಸ್ವೀಕರಿಸುವಂತಿಲ್ಲ
o ಈ ನಿಯಮವು ಕೆಳಕಂಡವರಿಗೆ ಅನ್ವಯಿಸುವುದಿಲ್ಲ
(i) ಸರ್ಕಾರ, ಸಹಕಾರೀ ಬ್ಯಾಂಕುಗಳೂ ಸೇರಿದಂತೆ ಯಾವುದೇ ಬ್ಯಾಂಕು, ಅಂಚೆ ಕಛೇರಿಗಳ ಉಳಿತಾಯ ಖಾತೆಗಳ ಸ್ವೀಕೃತಿಗಳಿಗೆ
(ii) ಕಲಂ 269ಎಸ್ಎಸ್ನಲ್ಲಿ ತಿಳಿಸಿದ ವ್ಯವಹಾರಗಳಿಗೆ
(iii) ಕಾಲಕಾಲಕ್ಕೆ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸುವ ವ್ಯಕ್ತಿಗಳಿಗೆ, ವರ್ಗಗಳಿಗೆ, ಅಥವಾ ಸ್ವೀಕೃತಿಗಳಿಗೆ.
15. ಕಲಂ 271ಡಿ, 271ಡಿಎ ಮತ್ತು 271ಈ - ದಂಡ
o ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ಸಮಾನ ಮೊತ್ತದ ದಂಡ ಪಾವತಿಸಬೇಕಾಗಿರುತ್ತದೆ
16. ಮೂಲದಲ್ಲಿ ತೆರಿಗೆ ಕಡಿತ : ( TDS )
ಪ್ರಕರಣ 192 : ವೇತನ :
o ಪ್ರತಿಯೊಂದು ಸಹಕಾರಿ ಸಂಸ್ಥೆಯೂ ತನ್ನ ಸಿಬ್ಬಂದಿಗಳಿಗೆ ನೀಡುವ ವೇತನದಲ್ಲಿ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡತಕ್ಕದ್ದು. ಆದರೆ ಯಾವುದೇ ಸಿಬ್ಬಂದಿಯ ವೇತನವು ಕಾಯ್ದೆಯ ನಿಯಮಗಳಂತೆ ವಿನಾಯಿತಿಗಳು, ಕಡಿತಗಳು, ಮತ್ತು ರಿಯಾಯಿತಿಗಳನ್ನು ಪರಿಗಣಿಸಿ ಗಣನೆ ಮಾಡಿದಾಗ ತೆರಿಗೆದಾಯಕ ಕನಿಷ್ಟ ಮಿತಿಗಿಂತ ಕಡಿಮೆಯಿದ್ದರೆ ಅಂತಹ ವೇತನದಲ್ಲಿ ತೆರಿಗೆ ಕಡಿತ ಮಾಡುವ ಅಗತ್ಯವಿಲ್ಲ. ತೆರಿಗೆಯನ್ನು ವೇತನದಲ್ಲಿ ಕಡಿತಗೊಳಿಸಿದ ಸಂದರ್ಭದಲ್ಲಿ ನೌಕರನಿಗೆ ನಮೂನೆ 16 ರಲ್ಲಿ ಪ್ರಮಾಣ ಪತ್ರ ನೀಡಬೇಕು.
ಪ್ರಕರಣ 194 ಎ: ಬಡ್ಡಿ :
o ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಯಾವುದೇ ಗ್ರಾಹಕನು ತನ್ನಲ್ಲಿ ಇಟ್ಟಿರುವ ಠೇವಣಿಗಳ ಮೇಲೆ ನೀಡುವ ಬಡ್ಡಿಯು ಒಂದು ಆರ್ಥಿಕ ವರ್ಷದಲ್ಲಿ 5,000-00 ರೂ.ಗಳಿಗೆ ಮೀರಿದಲ್ಲಿ ಅಂತಹ ಬಡ್ಡಿಯ ಮೇಲೆ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡಿ ನೀಡತಕ್ಕದ್ದು.
o ಯಾವುದೇ ಸಹಕಾರಿಯ ಸದಸ್ಯನು ಆ ಸಹಕಾರಿ ಸಂಸ್ಥೆಯಲ್ಲಿ ತಾನು ಹೊಂದಿದ ಯಾವುದೇ ಠೇವಣಿಯ ಮೇಲೆ ಎಷ್ಟೇ ಮೊತ್ತದ ಬಡ್ಡಿ ಬಂದಿರಲಿ ಅದನ್ನು ಪ್ರಕರಣ 194 ಎ ರಡಿಯಲ್ಲಿ ಆದಾಯ ತೆರಿಗೆ ಕಡಿತವಿಲ್ಲದೆ ಸ್ವೀಕರಿಸಲು ಅರ್ಹನಾಗಿರುತ್ತಾನೆ.
o ಸದಸ್ಯನಲ್ಲದ ಠೇವಣಿದಾರನು ಸೂಕ್ತ ನಮೂನೆಗಳಲ್ಲಿ ಘೋಷಣೆಗಳನ್ನು ಸಲ್ಲಿಸಿದಲ್ಲಿ ತಾನು ಹೊಂದಿದ ಠೇವಣಿಗಳ ಮೇಲೆ ಎಷ್ಟೇ ಮೊತ್ತದ ಬಡ್ಡಿ ಬಂದಿರಲಿ ಅದನ್ನು ಪ್ರಕರಣ 194(ಎ) ರಡಿಯಲ್ಲಿ ಆದಾಯ ತೆರಿಗೆ ಕಡಿತವಿಲ್ಲದೆ ಸ್ವೀಕರಿಸಲು ಅರ್ಹನಾಗಿರುತ್ತಾನೆ.
o 15ಉ ಹಿರಿಯ ನಾಗರೀಕರನ್ನು ಹೊರತುಪಡಿಸಿ ಇತರರು
o 15ಊಹಿರಿಯ ನಾಗರೀಕರು ( 60 ವರ್ಷಗಳಿಗೆ ಮೇಲ್ಪಟ್ಟವರು)
ಪ್ರಕರಣ 194 ಸಿ: ಗುತ್ತಿಗೆ :
o ಸಹಕಾರ ಸಂಸ್ಥೆಯು ಕಾರ್ಮಿಕ ಗುತ್ತಿಗೆ ಸಹಿತ ಯಾವುದೇ ಕಾಮಾಗಾರಿ ಒಪ್ಪಂದದನ್ವಯ ಗುತ್ತಿಗೆದಾರನಿಗೆ ಒಮ್ಮೆ 30,000 ರೂಗಳಿಗೆ ಯಾ ಒಂದು ವರ್ಷದಲ್ಲಿ 1,00,000 ರೂಗಳಿಗೆ ಮೀರಿ ಹಣ ನೀಡುವಾಗ ಅಂತಹ ಮೊಬಲಗಿನ ಮೇಲೆ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡಿ ನೀಡತಕ್ಕದ್ದು.
ಪ್ರಕರಣ 194 ಹೆಚ್ : ಕಮೀಷನ್ ಯಾ ದಲ್ಲಾಳಿ ಶುಲ್ಕ :
o ಸಹಕಾರ ಸಂಸ್ಥೆಯು 15,000 ರೂಗಳಿಗೆ ಮೀರಿ ಕಮೀಷನ್ ಯಾ ದಲ್ಲಾಳಿ ಶುಲ್ಕ ನೀಡುವಾಗ ಅಂತಹ ಮೊಬಲಗಿನ ಮೇಲೆ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡಿ ನೀಡತಕ್ಕದ್ದು.
o ಸಹಕಾರಿಯಿಂದ ಪಡೆಯುವ ಕಮೀಷನ್ ವಾರ್ಷಿಕ 15,000 ರೂಗಳಿಗೆ ಮೀರಿದ್ದಲ್ಲಿ ಮತ್ತು ಅಂತಹವರ ವಾರ್ಷಿಕ ತೆರಿಗೆದಾಯಕ ಆದಾಯವು ತೆರಿಗೆಯ ಮಿತಿಗಿಂತ ಕಡಿಮೆ ಇದ್ದಲ್ಲಿ ಸಂಬಂಧಿಸಿದ ಆದಾಯ ತೆರಿಗೆ ಅಧಿಕಾರಿಗಳಿಗೆ ನಮೂನೆ 13 ರಲ್ಲಿ ಅರ್ಜಿ ಸಲ್ಲಿಸಿ ವಿನಾಯಿತಿ ಪಡೆದಲ್ಲಿ ಅಂತಹವರಿಗೆ ಮೂಲದಲ್ಲಿ ತೆರಿಗೆ ಕಡಿತ ಮಾಡದೆ ಕಮೀಷನ್ ಪಾವತಿಸಬಹುದಾಗಿರುತ್ತದೆ.
ಪ್ರಕರಣ 194 ಐ : ಬಾಡಿಗೆ :
o ಸಹಕಾರ ಸಂಸ್ಥೆಯು ವಾರ್ಷಿಕ 1,80,000-00 ರೂಗಳಿಗೆ ಮೀರಿ ಬಾಡಿಗೆ ನೀಡುವಾಗ ಅಂತಹ ಮೊಬಲಗಿನ ಮೇಲೆ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡಿ ನೀಡತಕ್ಕದ್ದು. ಇಲ್ಲಿ ಬಾಡಿಗೆ ಎಂದರೆ ಲೀಸ್ ಯಾ ಯಾವುದೇ ಒಪ್ಪಂದದ ಮೇರೆಗೆ ಯಾವುದೇ ಭೂಮಿ ಯಾ ಕಟ್ಟಡ (ಪೀಠೋಪಕರಣ, ಜೋಡಣೆಗಳ ಸಹಿತ/ರಹಿತ)ಗಳ ಉಪಯೋಗಕ್ಕಾಗಿ ನೀಡುವ ಹಣ.
ಪ್ರಕರಣ 194 ಜೆ : ವೃತ್ತಿಪರ ಅಥವಾ ತಾಂತ್ರಿಕ ಸೇವೆಗಳ ಶುಲ್ಕ :
o ಸಹಕಾರ ಸಂಸ್ಥೆಯು ಯಾವುದೇ ವ್ಯಕ್ತಿಗೆ ವಾರ್ಷಿಕ 30,000 ರೂಗಳಿಗೆ ಮೀರಿ ವೃತ್ತಿಪರ ಅಥವಾ ತಾಂತ್ರಿಕ ಸೇವೆಗಳ ಶುಲ್ಕ ನೀಡುವಾಗ ಅಂತಹ ಮೊಬಲಗಿನ ಮೇಲೆ ನಿಗದಿತ ದರದಲ್ಲಿ ಆದಾಯ ತೆರಿಗೆಯನ್ನು ಮೂಲದಲ್ಲಿಯೇ ಕಡಿತಮಾಡಿ ನೀಡತಕ್ಕದ್ದು.
17. ಪ್ರಕರಣ 200 : ತೆರಿಗೆ ಕಡಿತಮಾಡಿದವರ ಬಾಧ್ಯತೆಗಳು
o ಮೇಲೆ ತಿಳಿಸಿದಂತೆ ಯಾವುದೇ ಬಾಬ್ತಿನಲ್ಲಿ ಮೂಲದಲ್ಲಿ ತೆರಿಗೆ ಕಡಿತಮಾಡಿದ ಸಹಕಾರಿ ಸಂಸ್ಥೆಯು ತೆರಿಗೆಯನ್ನು ಕಡಿತಮಾಡಿದ ತಿಂಗಳಿನ ಕೊನೆಯ ದಿನದಿಂದ ಏಳು ದಿನಗಳೊಳಗಾಗಿ ಕೇಂದ್ರ ಸರಕಾರಕ್ಕೆ ಜಮಾ ಮಾಡತಕ್ಕದ್ದು.
o ಕಡಿತಮಾಡಿ ಪಾವತಿಸಿದ ತೆರಿಗೆಯ ವಿವರಗಳನ್ನು ಮೂರು ತಿಂಗಳಿಗೊಮ್ಮೆಯಂತೆ ಸೂಕ್ತ ನಮೂನೆಯಲ್ಲಿ ದಾಖಲಿಸಿ ಸಂಬಂಧಿಸಿದ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸತಕ್ಕದ್ದು.
o ಕಡಿತ ಮಾಡಿದ ತೆರಿಗೆ ಪ್ರಮಾಣಪತ್ರವನ್ನು ನಮೂನೆ 16ಎ ನಲ್ಲಿ ಸಂಬಂಧಿಸಿದ ವ್ಯಕ್ತಿಗೆ ನೀಡತಕ್ಕದ್ದು.
o ಕಾಯ್ದೆಯ ಪ್ರಕಾರ ಮೂಲದಲ್ಲಿ ತೆರಿಗೆ ಕಡಿತ ಮಾಡುವ ಪ್ರತಿಯೊಂದು ಸಹಕಾರಿ ಸಂಸ್ಥೆಯು ಸೂಕ್ತ ಪ್ರಾಧಿಕಾರಕ್ಕೆ ನಮೂನೆ 49 ಬಿ ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ತೆರಿಗೆ ಖಾತೆÂ ಸಂಖ್ಯೆಯನ್ನು (ಖಿಂಓ) ಪಡೆಯತಕ್ಕದ್ದು ಮತ್ತು ಮೂಲದಲ್ಲಿ ಕಡಿತ ಮಾಡಿದ ತೆರಿಗೆ ಪಾವತಿಸುವ ಎಲ್ಲ ಚಲನ್ಗಳಲ್ಲಿ ಮತ್ತು ಎಲ್ಲಾ ಮೂಲದಲ್ಲಿ ತೆರಿಗೆ ಕಡಿತ ಮಾಡಿದ ಪ್ರಮಾಣಪತ್ರಗಳಲ್ಲಿ ಈ ತೆರಿಗೆ ಖಾತೆÂ ಸಂಖ್ಯೆಯನ್ನು ತಪ್ಪದೇ ನಮೂದಿಸತಕ್ಕದ್ದು.
18. ಟಿಡಿಎಸ್ : ನೋಟಿಸು : ಸಾಮಾನ್ಯ ಕಾರಣಗಳು
o Non Deduction/Short Deduction
o Late Deduction/Late Payment of tax
o Non payment/Short payment
o Wrong Deduction/Wrong payment
o Non Filing/Late Filing
o Non issue - Form16/16A.
19. ಟಿಡಿಎಸ್ : ನ್ಯೂನತೆಗಳ ಪರಿಣಾಮಗಳು
o Interest on non deduction/short deduction
o Interest on late deduction/Late payment
o Interest on Non payment/Short Payment
o Late filing fee u/s 234E for non filing/late filing
o Penalty for non deduction u/s 271C
o Penalty for non payment/short payment
20. ಮಾಹಿತಿ ಸಂಗ್ರಹಣೆ
o ಕಲಂ 133(6)ರ ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳು ಕಾಯ್ದೆಯಡಿಯಲ್ಲಿನ ಯಾವುದೇ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಯಾವುದೇ ರೀತಿಯ ಮಾಹಿತಿಯನ್ನು ಕೇಳಿ ಪಡೆಯಬಹುದಾಗಿರುತ್ತದೆ
o ಸಾಮಾನ್ಯವಾಗಿ ಇಲಾಖೆಯವರು ಕೇಳುವ ಮಾಹಿತಿಗಳು:
o ಒಮ್ಮೆ 50,000ರೂಗಳಿಗಿಂತ ಹೆಚ್ಚು ನಗದು ಠೇವಣಿಯ ವಿವರಗಳು
o ವರ್ಷದಲ್ಲಿ 2 ಲಕ್ಷ ರೂಗಳಿಗಿಂತ ಹೆಚ್ಚು ನಗದು ಠೇವಣಿಯ ವಿವರಗಳು
o ವಾರ್ಷಿಕ 10,000ರೂಗಳಿಗಿಂತ ಹೆಚ್ಚು ಬಡ್ಡಿ ಪಾವತಿ ಮಾಡಿದ ವಿವರಗಳು
o ಅವರು ಕೇಳಿದ ಮಾಹಿತಿಗಳನ್ನು ನೀಡುವುದು ಶಾಸನಾತ್ಮಕ ಜವಾಬ್ದಾರಿ.
21. PAN & TAN
o ಪ್ರತಿ ಸಹಕಾರಿಯೂ ನಮೂನೆ 49ಎ ನಲ್ಲಿ ಅರ್ಜಿ ಸಲ್ಲಿಸಿ ಖಾಯಂ ನೋಂದಣಿ ಸಂಖ್ಯೆಯನ್ನು (PAN) ಪಡೆಯತಕ್ಕದ್ದು
o ಆದಾಯ ತೆರಿಗೆ ಪಾವತಿಸುವ ಎಲ್ಲ ಚಲನ್ಗಳಲ್ಲಿ ಮತ್ತು ವಾರ್ಷಿಕ ಆದಾಯ ತೆರಿಗೆ ವಿವರ ಸಲ್ಲಿಸುವಾಗ ಈ ಖಾಯಂ ನೋಂದಣಿ ಸಂಖ್ಯೆಯನ್ನು ತಪ್ಪದೇ ನಮೂದಿಸತಕ್ಕದ್ದು
o ಮೂಲದಲ್ಲಿ ತೆರಿಗೆ ಕಡಿತ ಮಾಡುವ ಪ್ರತಿಯೊಂದು ಸಹಕಾರಿಯೂ ನಮೂನೆ 49(ಬಿ)ನಲ್ಲಿ ಅರ್ಜಿ ಸಲ್ಲಿಸಿ ತೆರಿಗೆ ಖಾತೆ ಸಂಖ್ಯೆಯನ್ನು (TAN) ಪಡೆಯತಕ್ಕದ್ದು
o ಮೂಲದಲ್ಲಿ ಕಡಿತ ಮಾಡಿದ ತೆರಿಗೆ ಪಾವತಿಸುವ ಎಲ್ಲ ಚಲನ್ಗಳಲ್ಲಿ ಮತ್ತು ಎಲ್ಲ ಮೂಲದಲ್ಲಿ ತೆರಿಗೆ ಕಡಿತ ಮಾಡಿದ ಪ್ರಮಾಣಪತ್ರಗಳಲ್ಲಿ ಈ ತೆರಿಗೆ ಖಾತೆ ಸಂಖ್ಯೆಯನ್ನು ತಪ್ಪದೇ ನಮೂದಿಸತಕ್ಕದ್ದು.
ಇದಲ್ಲದೆ 2017ರ ವಿತ್ತೀಯ ಕಾಯ್ದೆಯಲ್ಲಿ ಸಹಕಾರಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಳಕಂಡ ಬದಲಾವಣೆಗಳನ್ನು ಗಮನಿಸುವುದೊಳಿತು.
22. ವೆಚ್ಚಗಳ ಪಾವತಿ
• ಆದಾಯ ತೆರಿಗೆ ಕಾಯ್ದೆಯ ಕಲಂ 40ಎ(3)ರನ್ವಯ ಯಾವುದೇ ಒಂದು ದಿನ ಒಬ್ಬ ವ್ಯಕ್ತಿಗೆ ರೂ.10,000ಗೆ ಮೀರಿ ಯಾವುದೇ ವೆಚ್ಚವನ್ನು ನಗದಾಗಿ ಪಾವತಿಸುವಂತಿಲ್ಲ. ಈ ಮಿತಿ ಇದುವರೆಗೆ 20,000 ರೂಗಳಾಗಿತ್ತು. ದಿನಾಂಕ 01-04-2017ರಿಂದ ಈ ಮಿತಿಯನ್ನು 10,000 ರೂಗಳಿಗೆ ಇಳಿಸಲಾಗಿದೆ.
23. ದಾನಗಳ ಪಾವತಿ
• ಆದಾಯ ತೆರಿಗೆ ಕಾಯ್ದೆಯ ಕಲಂ 80 ಜಿ ಅಡಿಯಲ್ಲಿ ಮಾನ್ಯವಾಗಲು ರೂ.2,000ಗೆ ಮೀರಿ ಯಾವುದೇ ದಾನಗಳನ್ನು ನಗದಾಗಿ ಪಾವತಿಸುವಂತಿಲ್ಲ. ಇದುವರೆಗೆ ನಗದು ರೂಪದಲ್ಲಿ ದಾನ ನೀಡಲು 20,000 ರೂಗಳ ಮಿತಿಯಿತ್ತು.
24. ತೆರಿಗೆ ವರದಿ ಸಲ್ಲಿಸುವಿಕೆಯಲ್ಲಿ ವಿಳಂಬ
• ಸಹಕಾರಿಗಳು ಪ್ರತಿವರ್ಷ ಸೆಪ್ಟೆಂಬರ್ 30ರೊಳಗಾಗಿ ತಮ್ಮ ಆದಾಯ ತೆರಿಗೆ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿರುತ್ತದೆ. ಇದುವರೆಗೆ ವಿಳಂಬವಾದಲ್ಲಿ ಯಾವುದೇ ದಂಡಗಳನ್ನು ವಿಧಿಸುತ್ತಿರಲಿಲ್ಲ. ಇನ್ನು ಮುಂದೆ ನಿಗದಿತ ದಿನಾಂಕದ ನಂತರ ಸಲ್ಲಿಸಿದಲ್ಲಿ ವಿಳಂಬಕ್ಕಾಗಿ ದಂಡ ತೆರಬೇಕಾಗುತ್ತದೆ. ನಿಗದಿತ ದಿನಾಂಕದ ನಂತರ ಡಿಸೆಂಬರ್ 31ರವರೆಗೆ 5,000 ರೂಗಳ ದಂಡವನ್ನೂ ತದನಂತರ 10,000 ರೂಗಳ ದಂಡವನ್ನೂ ಪಾವತಿಸಬೇಕಾಗುತ್ತದೆ.
25. ದಾಖಾಲಾತಿಗಳ ನಿರ್ವಹಣೆ
• ಸಹಕಾರಿಯ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕಪತ್ರಗಳು, ಲೆಕ್ಕಪುಸ್ತಕಗಳು, ಖರೀದಿ ಬಿಲ್ಲುಗಳು, ಮಾರಾಟದ ಬಿಲ್ಲುಗಳು, ವೆಚ್ಚ ಪಾವತಿಯ ವೋಚರ್ಗಳು, ಸ್ವೀಕೃತಿಯ ರಸೀದಿಗಳೂ ಸೇರಿದಂತೆ ಎಲ್ಲ ದಾಖಲಾತಿಗಳನ್ನೂ ಇನ್ನು ಮುಂದೆ ಹತ್ತು ವರ್ಷಗಳವರೆಗೆ ಕಾಪಾಡಬೇಕು. ಇದುವರೆಗೆ ಏಳು ವರ್ಷಗಳವರೆಗೆ ಕಾಪಾಡುವುದು ಅಗತ್ಯವಿತ್ತು.
ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ ಕಾಯ್ದೆ)
ಜಿಎಸ್ಟಿ –ಎಂದರೇನು?
o ಜಿಎಸ್ಟಿ ಅಥವಾ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಎಂಬುದು ಒಂದು ದೇಶ ಒಂದು ಕಾಯ್ದೆ ಎಂಬ ಆಶಯದ ಹಿನ್ನೆಲೆಯಲ್ಲಿ ರೂಪುಗೊಂಡ ಪರೋಕ್ಷ ತೆರಿಗೆ ಕಾಯ್ದೆಯಾಗಿರುತ್ತದೆ. ಇದರಿಂದಾಗಿ ಇಡೀ ದೇಶ ಒಂದೇ ಸಾಮಾನ್ಯ ಮಾರುಕಟ್ಟೆಯಾಗುವುದು. ಉತ್ಪಾದಕನಿಂದ ಉಪಯೋಗಿಸುವವನವರೆಗೆ ಉತ್ಪಾದನೆ, ಪೂರೈಕೆ, ಸೇವೆಗಳ ಮೇಲೆ ವಿಧಿಸುವ ಒಂದೇ ತೆರಿಗೆ ಇದಾಗಿರುತ್ತದೆ. ಪ್ರತಿಹಂತದಲ್ಲೂ ಹೂಡುವಳಿ ತೆರಿಗೆಯ ಲಾಭ ಸಿಗುವುದರಿಂದ ಅಂತಿಮ ಗ್ರಾಹಕನು ತಾನು ಕೊಳ್ಳುವ ಮಾಲಿನ ಮೇಲೆ ಕೊನೆಯ ವ್ಯಾಪಾರಿ ವಿಧಿಸುವ ತೆರಿಗೆಯನ್ನು ಮಾತ್ರ ಪಾವತಿಸುತ್ತಾನೆ.
ಜಿಎಸ್ಟಿ ಅಗತ್ಯವೇನು?
o ಪ್ರಸಕ್ತ ನಮ್ಮ ದೇಶದಲ್ಲಿ ಅನೇಕ ಪರೋಕ್ಷ ತೆರಿಗೆಗಳು ಜಾರಿಯಲ್ಲಿವೆ. ಪ್ರತಿ ರಾಜ್ಯದಲ್ಲೂ ಅನೇಕ ಪರೋಕ್ಷ ತೆರಿಗೆಗಳು ಚಾಲ್ತಿಯಲ್ಲಿವೆ. ಪ್ರತಿ ತೆರಿಗೆ ಕಾಯ್ದೆಯಲ್ಲೂ ಜಟಿಲತೆ, ಗೊಂದಲಗಳು ಮುಂದುವರೆಯುತ್ತಿವೆ. ಅದಲ್ಲದೆ ಈ ಎಲ್ಲ ಪರೋಕ್ಷ ತೆರಿಗೆಗಳು ಬಹು ಹಂತದ ತೆರಿಗೆ ಪದ್ಧತಿಯಲ್ಲಿರುವುದರಿಂದ ಅಂತಿಮ ಗ್ರಾಹಕನು ತೆರಿಗೆಯ ಮೇಲೆ ತೆರಿಗೆ ಕೊಡುವ ಪರಿಸ್ಥಿತಿ ಉಂಟಾಗಿರುತ್ತದೆ. ಅನೇಕ ತೆರಿಗೆಗಳನ್ನು ಅನುಷ್ಠಾನ ಮಾಡಲು ಸರಕಾರದ ಅನೇಕ ಇಲಾಖೆಗಳು ಇರುವುದರಿಂದ ಸರಕಾರವು ಅನಗತ್ಯ ಆಡಳಿತಾತ್ಮಕ ವೆಚ್ಚಗಳನ್ನು ಭರಿಸುವ ಸ್ಥಿತಿಯಿರುತ್ತದೆ. ತಯಾರಕರು, ಉದ್ದಿಮೆದಾರರು, ಹಂಚಿಕೆದಾರರು, ವ್ಯಾಪಾರಸ್ಥರು, ಸೇವಾದಾತರು, ಹೀಗೆ ಎಲ್ಲ ವಾಣಿಜ್ಯ ವಹಿವಾಟುದಾರರೂ ಅನಗತ್ಯವಾಗಿ ಹೆಚ್ಚಿನ ಅನುಸರಣಾ ವೆಚ್ಚಗಳನ್ನು ಭರಿಸಬೇಕಾದ ಪರಿಸ್ಥಿತಿಯಿದೆ. ಈ ಎಲ್ಲ ತೊಂದರೆಗಳನ್ನು ನಿವಾರಿಸಲು ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಹೊಸ ಕಾಯ್ದೆಯೇ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ
ಏನೇನು ವಿಲೀನಗೊಳ್ಳುತ್ತದೆ ?
o ಪ್ರಸ್ತಾಪಿತ ಜಿಎಸ್ಟಿ ಕಾಯ್ದೆಯಲ್ಲಿ ಕೆಳಕಾಣಿಸಿದ ತೆರಿಗೆ ಕಾಯ್ದೆಗಳು ವಿಲೀನಗೊಳ್ಳುತ್ತವೆ.
| ಕೇಂದ್ರ ತೆರಿಗೆಗಳು | ರಾಜ್ಯ ತೆರಿಗೆಗಳು |
|---|---|
| Central Excise Duty | State Value Added Tax/Sales Tax |
| Additional Excise Duty | Entertainment Tax (other than levied by local bodies) |
| Service Tax | Octroi |
| Customs Duty | Entry tax |
| Additional Customs Duty | Purchase Tax |
| Special Additional Duty of Customs | Luxury tax |
| Central Sales Tax | Taxes on lottery |
| Cesses and surcharges | Betting and Gambling |
o ಪ್ರಸ್ತಾಪಿತ ಜಿಎಸ್ಟಿ ಕಾಯ್ದೆಯಲ್ಲಿ ಕೆಳಕಾಣಿಸಿದ ಪರೋಕ್ಷ ತೆರಿಗೆ ಕಾಯ್ದೆಗಳು ವಿಲೀನಗೊಳ್ಳುವುದಿಲ್ಲ.
| ಕೇಂದ್ರ ತೆರಿಗೆಗಳು | ರಾಜ್ಯ ತೆರಿಗೆಗಳು |
|---|---|
| Import Duty | Stamp Duty |
| Road Tax | |
| Electricity Tax | |
| Local Taxes (Levied by Local Bodies) |
o ಚೇರ್ಮನ್ - ಕೇಂದ್ರ ವಿತ್ತ ಸಚಿವರು
o ವೈಸ್ ಚೇರ್ಮನ್ - ರಾಜ್ಯ ವಿತ್ತಮಂತ್ರಿಗಳಲ್ಲಿ ಆಯ್ಕೆಗೊಂಡವರು
o ಸದಸ್ಯರು - ಕೇಂದ್ರ ವಿತ್ತ ಸಚಿವರು (ರಾಜ್ಯಖಾತೆ) ಮತ್ತು ಎಲ್ಲಾ ರಾಜ್ಯಗಳ ವಿತ್ತ
ಸಚಿವರು
o ಕೋರಂ - ಒಟ್ಟು ಸದಸ್ಯರಲ್ಲಿ ಕನಿಷ್ಟ 50% ಸದಸ್ಯರು
o ಪ್ರಾಮುಖ್ಯತೆ - ರಾಜ್ಯಗಳಿಗೆ 3ನೇ 2ರಷ್ಟು, ಕೇಂದ್ರಕ್ಕೆ 3ನೇ 1ರಷ್ಟು
o ನಿರ್ಧಾರಗಳು - 75% ಬಹುಮತದಿಂದ
o ಕೌನ್ಸಿಲ್ ಜಿಎಸ್ಟಿಗೆ ಸಂಬಂಧಿಸಿದ ಕಾನೂನು, ನಿಯಮಗಳು, ದರಗಳು ಸೇರಿದಂತೆ ಎಲ್ಲ ವಿಷಯಗಳಿಗೆ ಶಿಫಾರಸ್ಸು ಮಾಡಲು ಅಧಿಕಾರ ಹೊಂದಿರುತ್ತದೆ.
ಜಿಎಸ್ಟಿ ನೆಟ್ವರ್ಕ್
• ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಮಾನ ಅಂತರ ಕಾಯ್ದುಕೊಂಡಿರುವ ಒಂದು ಸ್ವಾಯತ್ತ ಸಂಸ್ಥೆ
• ಮಾಹಿತಿ, ತಂತ್ರಜ್ಞಾನ, ಅಂತರ್ಜಾಲ ವಿಷಯಗಳಲ್ಲಿ ಸರ್ಕಾರಗಳಿಗೆ ಸಲಹೆ ನೀಡಲು ಅಧಿಕಾರ
• ಜಿಎಸ್ಟಿಯ ಎಲ್ಲ ಅಗತ್ಯ, ಸಮಸ್ಯೆಗಳಿಗೆ ಏಕ ಗವಾಕ್ಷಿ ಪರಿಹಾರ ಕೇಂದ್ರ
• ಜಿಎಸ್ಟಿಯ ಮಾಹಿತಿ ತಂತ್ರಜ್ಞಾನ ಜಾಲದ ರೂವಾರಿ
• ಎಲ್ಲ ವರದಿಗಳ ತ
• ಕಂಪೆನಿ ಕಾಯ್ದೆಯ ಕಲಂ 25ರಡಿಯಲ್ಲಿ ನೋಂದಣಿಯಾದ ಲಾಭೇತರ ಸಂಸ್ಥೆಯಾದ ಇದನ್ನು ಜಿಎಸ್ಟಿಯ ಲೆಕ್ಕಪತ್ರ ನಿರ್ವಹಣೆ, ನಿಯಂತ್ರಣ ಮತ್ತು ತೆರಿಗೆ ಸಂಗ್ರಹಣೆಯ ಉಸ್ತುವಾರಿಗಾಗಿ ಸ್ಥಾಪಿಸಲಾಗಿದೆ
• ಸರ್ಕಾರ (49%) ಮತ್ತು ಖಾಸಗಿ (51%) ಸಹಭಾಗಿತ್ವದಲ್ಲಿ ಜಂಟಿ ಮಾಲಿಕತ್ವದ ಸಂಸ್ಥೆ
• ಹತ್ತು ಕೋಟಿ ರೂಪಾಯಿಗಳ ಪ್ರಾರಂಭಿಕ ಬಂಡವಾಳ
• ಜಿಎಸ್ಟಿಗಾಗಿ ಪರೋಕ್ಷ ತೆರಿಗೆ ವೇದಿಕೆಯನ್ನು ಸಿದ್ಧಪಡಿಸಿ ಜಾರಿಗೊಳಿಸುವ ಹೊಣೆಗಾರಿಕೆ.
ಜಿಎಸ್ಟಿಯ ಪ್ರಯೋಜನಗಳೇನು?
o ಉದ್ದಿಮೆದಾರರು, ಕೈಗಾರಿಕೆಗಳು, ವಹಿವಾಟುದಾರರಿಗೆ
• ಸರಳೀಕೃತ ಶಾಸನಬದ್ಧ ಅನುಸರಣೆಗಳು
• ತೆರಿಗೆ ರಚನೆ ಮತ್ತು ದರಗಳಲ್ಲಿ ಸಮಾನತೆ
• ಬಹುಹಂತದ ತೆರಿಗೆ ಪದ್ಧತಿಯ ಕೈಬಿಡುವಿಕೆ
• ಹೆಚ್ಚಿದ ಸ್ಪರ್ಧಾಶಕ್ತಿ
• ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ
• ತಯಾರಕರು, ರಫ್ತುದಾರರಿಗೆ ಹೆಚ್ಚಿದ ಅವಕಾಶ, ಲಾಭ
o ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ
• ಆಡಳಿತಾತ್ಮಕ ಸುಧಾರಣೆ
• ಸುಲಭವಾದ ತೆರಿಗೆ ವಸೂಲಿ ಕ್ರಮಗಳು
• ತೆರಿಗೆ ಸೋರಿಕೆ, ವಂಚನೆಗಳಲ್ಲಿ ಇಳಿಕೆ ನಿರೀಕ್ಷೆ
• ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣೆ
• ಹೆಚ್ಚಿನ ದಕ್ಷತೆ ಮತ್ತು ಆದಾಯ ನಿರೀಕ್ಷೆ
o ಗ್ರಾಹಕರು, ಬಳಕೆದಾರರಿಗೆ
• ಪಾರದರ್ಶಕ ತೆರಿಗೆಯಿಂದಾಗಿ ಹೆಚ್ಚಿದ ನಂಬಿಕೆ
• ತೆರಿಗೆ ತಪ್ಪಿಸುವ ಮನೋಭಾವನೆ ಕಡಿಮೆಯಾಗುವ ಸಂಭವ
• ಒಟ್ಟಾರೆ ತೆರಿಗೆ ಭಾರದಲ್ಲಿ ಇಳಿಕೆ
ಸಹಕಾರಿಗಳಿಗೆ ಜಿಎಸ್ಟಿ ಅನ್ವಯಿಸುವುದೆ?
o ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.
o ವ್ಯಕ್ತಿಯ ಪರಿಭಾಷೆಯಲ್ಲಿ ಸಹಕಾರಿ ಸಂಸ್ಥೆಗಳೂ ಸೇರಿವೆ (a co-operative society registered under any law relating to co-operative societies; )
o ಪೂರೈಕೆ
• ಒಬ್ಬ ವ್ಯಕ್ತಿಯು ತನ್ನ ವ್ಯವಹಾರದಲ್ಲಿ ಯಾ ವ್ಯವಹಾರಕ್ಕೋಸ್ಕರ ಪ್ರತಿಫಲಕ್ಕಾಗಿ ಮಾಡುವ ಯಾ ಮಾಡಲು ಒಪ್ಪುವ ಎಲ್ಲಾ ರೀತಿಯ ಸರಕು ಯಾ ಸೇವೆಯ ಪೂರೈಕೆ
• All forms of supply of goods or services or both made or agreed to be made for a consideration by a person in the course or furtherance of business
o ಸರಕು ಯಾ ಸೇವೆ
• ಸರಕು ಎಂದರೆ ಹಣ, ಭದ್ರತಾಪತ್ರಗಳ ಹೊರತಾಗಿ ಎಲ್ಲಾ ತರಹದ ಚರಸೊತ್ತುಗಳು (Goods means every kind of movable property other than money and securities )
• ಸರಕು, ಹಣ, ಭದ್ರತಾಪತ್ರಗಳ ಪೂರೈಕೆಗಳ ಹೊರತಾಗಿ ಯಾವುದೇ ರೀತಿಯ ಪೂರೈಕೆ (Any supply other than goods, money and securities)
o ವಿನಾಯಿತಿ
• ಕ್ರೆಡಿಟ್ಕಾರ್ಡ್ ಸೇವೆಯ ಮೇಲಿನ ಬಡ್ಡಿ ಯಾ ಶುಲ್ಕದ ಹೊರತಾಗಿ ಯಾವುದೇ ಠೇವಣಿ ಯಾ ಸಾಲದ ಮೇಲೆ ಸ್ವೀಕರಿಸುವ ಎಲ್ಲಾ ರೀತಿಯ ಬಡ್ಡಿ ಯಾ ರಿಯಾಯಿತಿಗಳು
• ವಿದೇಶೀ ಹಣ ಮಾರಾಟ/ಖರೀದಿಯ ಆದಾಯ
ಸಹಕಾರಿ ಸಂಸ್ಥೆಗಳು ಮತ್ತು ಜಿಎಸ್ಟಿ
o ಸಹಕಾರಿ ಸಂಸ್ಥೆಗಳು ತೆರಿಗೆದಾಯಕ ಸೇವೆ ನೀಡುತ್ತಿದ್ದಲ್ಲಿ ನೋಂದಣಿಯಾಗಿ ತೆರಿಗೆ ಪಾವತಿಸಬೇಕಿರುತ್ತದೆ
o ಸಹಕಾರಿ ಸಂಸ್ಥೆಗಳ ಎಲ್ಲ ರೀತಿಯ ಒಟ್ಟು ಆದಾಯಗಳು ಅಂದರೆ ಬಡ್ಡಿಯೂ ಸೇರಿದಂತೆ ಕಮಿಷನ್, ಬೋನಸ್, ದಾಖಲಾತಿ ಶುಲ್ಕ, ಲಾಕರ್ ಬಾಡಿಗೆ, ಫೀಸ್, ಬ್ರೋಕರೇಜ್, ರಿಕವರಿ ಚಾರ್ಜಸ್, ಡಿಸ್ಕೌಂಟ್, ಲೀಗಲ್ ಯಾ ಇತರೆ ಶುಲ್ಕಗಳು ವಾರ್ಷಿಕ 20 ಲಕ್ಷ ರೂಗಳಿಗೆ ಮೀರುವಂತಿದ್ದರೆ ನೋಂದಣಿ ಪಡೆಯಬೇಕು
o ಸಹಕಾರಿ ಸಂಸ್ಥೆಗಳ ಎಲ್ಲ ರೀತಿಯ ಬಡ್ಡಿಯೇತರ ಆದಾಯಗಳ ಮೇಲೆ ಶೇ.18ರಂತೆ ಜಿಎಸ್ಟಿ ತೆರಿಗೆ ಪಾವತಿಸಬೇಕು
ನೋಂದಣಿ
• ಸಹಕಾರಿ ಸಂಸ್ಥೆಗಳು
o ತೆರಿಗೆದಾಯಕ ಸೇವೆ ನೀಡುತ್ತಿದ್ದಲ್ಲಿ ಮತ್ತು
o ಒಟ್ಟು ವಹಿವಾಟು 20 ಲಕ್ಷ ಮೀರಿದಲ್ಲಿ
o ನೋಂದಣಿಯಾಗಿ ತೆರಿಗೆ ಪಾವತಿಸಬೇಕಿರುತ್ತದೆ
• ವಹಿವಾಟು ಎಂದರೆ ಸರಕು ಮತ್ತು ಸೇವೆಗಳ ಸರಬರಾಜು ಎರಡೂ ಸೇರಿರುತ್ತದೆ
• ಕೇವಲ ವಿನಾಯಿತಿ ಸೇವೆ ನೀಡುವವರು ಅರ್ಹ ಮಿತಿ ದಾಟಿದರೂ ನೋಂದಣಿ ಕಡ್ಡಾಯವಿಲ್ಲ
• ಕರದಾಯಕ ಸೇವೆ ನೀಡುವ ಸಹಕಾರಿಯ ಒಟ್ಟು ವಹಿವಾಟು ಮಿತಿ ದಾಟದಿದ್ದಲ್ಲಿ ನೋಂದಣಿ ಕಡ್ಡಾಯವಿಲ್ಲ.