ಕಳೆದ 18 ವರ್ಷಗಳಿಂದ ಸಹಕಾರ ಕ್ಷೇತ್ರದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಅತ್ಯಂತ ಯಶಸ್ವಿಯಾಗಿ, ಕಾರ್ಯನಿರ್ವಹಿಸಲು ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ತಮಗೂ, ತಮ್ಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಿಗೂ ಹಾಗೂ ತಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗದವರಿಗೂ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ನ ಆಡಳಿತ ಮಂಡಳಿಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ .
ಆತ್ಮೀಯ ಸಹಕಾರಿ ಬಂಧುಗಳೇ,
ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ನ ವತಿಯಿಂದ ಈ ಕೆಳಕಂಡ ಕಾರ್ಯಕ್ರಮಗಳ ಕ್ರಿಯಾಯೋಜನೆಯನ್ನು ಸದಸ್ಯ ಸಹಕಾರಿಗಳಿಗಾಗಿ ರೂಪಿಸಲಾಗಿದೆ.
1. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಿಗಾಗಿ 2 ದಿನಗಳ ಉನ್ನತ ಮಟ್ಟದ ತರಬೇತಿ-ಅಂಕಿತಾ ವಿಸ್ತಾ ಸ್ಪಾ ಅಂಡ್ ರೆಸಾರ್ಟ, ಬೆಂಗಳೂರು.
2. ಸಿಬ್ಬಂದಿಗಳಿಗಾಗಿ 3 ದಿನದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಶ್ರೀರಂಗಪಟ್ಟಣ ಮೈಸೂರು.
3. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗಾಗಿ ಅಭಿವೃದ್ಧಿ ಯೋಜನಾ ತರಬೇತಿ ಒಂದು ದಿನದ ಕಾರ್ಯಾಗಾರ ಬೆಂಗಳೂರು.
4. ಮಹಿಳಾ ನಿರ್ದೇಶಕರಿಗಾಗಿ ಒಂದು ದಿನದ ವಿಶೇಷ ಆಡಳಿತಾಭಿವೃದ್ದಿ ತರಬೇತಿ ಬೆಂಗಳೂರು.
5. ವಿದೇಶ ಅಧ್ಯಯನ ಪ್ರವಾಸ : 5 ದಿನಗಳ ವಿದೇಶಿ ಅಧ್ಯಯನ ಪ್ರವಾಸ ಆಗಸ್ಟ್ 2019.
6. ಒಂದು ರಾಜ್ಯ ಮಟ್ಟದ ಕಾರ್ಯಾಗಾರ
7. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ
8. 30 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ “ ಕಾರ್ಯಕ್ಷಮತೆ ಅಭಿವೃದ್ದಿ ತರಬೇತಿ ”
9. ಮಹಿಳಾ ಸಹಕಾರ ಸಂಸ್ಥೆಗಳಿಗಾಗಿ “ ಕ್ರಿಯಾ ಯೋಜನಾ ತರಬೇತಿ ” ಕಲಬುರಗಿ.
10. ವಲಯವಾರು ತರಬೇತಿ ಕಾರ್ಯಕ್ರಮಗಳು - ಬೆಳಗಾವಿ, ಚಿಕ್ಕೋಡಿ, ಅಥಣಿ, ರಾಣಿಬೆನ್ನೂರು, ಕಾರವಾರ ಮಂಗಳೂರು, ಕುಂದಾಪುರ, ಹಾಸನ, ಚಾಮರಾಜನಗರ ಮತ್ತು ಬೆಂಗಳೂರು.
11. ಆಸಕ್ತ 30 (ಜಿಲ್ಲೆಗೆ ಒಂದರಂತೆ) ಸದಸ್ಯರನ್ನು ದೆಹಲಿಯಲ್ಲಿ ನಡೆಯುವ ವಿಶೇಷ “ ಸಹಕಾರಿ ವಿಚಾರ ಸಂಕಿರಣಕ್ಕೆ ” ಕಳುಹಿಸುವುದು.
ಪ್ರಸ್ತುತ ಅಸೋಸಿಯೇಷನ್ ಸದಸ್ಯತ್ವ ನೋಂದಣಿ ಪ್ರಾರಂಭಿಸಿದ್ದು, ತಮ್ಮ ಸಂಸ್ಥೆಗೆ ಅಸೋಸಿಯೇಷನ್ ಸದಸ್ಯತ್ವ ನೀಡಲು ತೀರ್ಮಾನಿಸಲಾಗಿದೆ. ಅಸೋಸಿಯೇಷನ್ ಸದಸ್ಯತ್ವ ಶುಲ್ಕ ರೂ. 11,100/-( ಹನ್ನೊಂದು ಸಾವಿರದ ಒಂದು ನೂರು ) ರೂಪಾಯಿಗಳು ಮಾತ್ರವನ್ನು ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ (ರಿ) (KARNATAKA STATE CO-OPERATIVE SOCIETIES ASSOCIATION (R) ಹೆಸರಿಗೆ ಡಿ.ಡಿ. / ಚೆಕ್ ಮೂಲಕ ಪಾವತಿಸಲು ಕೋರುತ್ತೇನೆ.
ಲ್ಲಿಸುತ್ತೇನೆ.